ಯಶಸ್ವಿನಿ ಯೋಜನೆ

ಯೋಜನೆಯ ಅರ್ಹತೆ:

ಯೋಜನೆಯ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಗ್ರಾಮೀಣ ಪ್ರದೇಶದ ಸದಸ್ಯರೊಬ್ಬರಿಗೆ ವಾರ್ಷಿಕ ವಿಮಾ ಕಂತು 300 ರೂಗಳನ್ನು ಮತ್ತು ನಗರ ಪ್ರದೇಶದ ಸದಸ್ಯರುಗಳಿಗೆ 710 ರೂಗಳನ್ನು ನಿಗಧಿಗೊಳಿಸಲಾಗಿದೆ. ಇದಕ್ಕೆ ಸರಿಸಮಾನವಾದ ಸಹಾಯ ಧನವನ್ನು ಕರ್ನಾಟಕ ಸರ್ಕಾರವು ನೀಡುತ್ತದೆ. ನಿಧಿಯ ಮೊತ್ತದಿಂದ ಯೋಜನೆಯಡಿಯಲ್ಲಿ ಕಾಯಿಲೆಗಳಿಗೆ ತುತ್ತಾದ ಗ್ರಾಮೀಣ ಸದಸ್ಯರೊಬ್ಬಗೆ ವಾರ್ಷಿಕ 2 ಲಕ್ಷರೂಗಳ ಮತ್ತು ನಗರ ಸದಸ್ಯರೊಬ್ಬಗೆ ವಾರ್ಷಿಕ 2.25 ಲಕ್ಷರೂಗಳ ಮಿತಿಯಂತೆ ದ್ವಿತೀಯ ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಯನ್ನು ಸಲ್ಲಿಸುವಂತೆ ಅನುಷ್ಠಾನಗೊಳಿಸಲಾಗಿದೆ.

ವೈದ್ಯಕೀಯ ಸೌಲಭ್ಯದ ಪ್ಯಾಕೇಜಗಳು:

ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಕೆಳಗಿನ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

1. ಹೃದಯ ಮತ್ತು ಹೃದಯ ಎದೆಗೂಡಿನ ಶಸ್ತ್ರಚಿಕಿತ್ಸೆ   2. ನಾಳಿಯ ಶಸ್ತ್ರ ಚಿಕಿತ್ಸೆ 3.ಸಾಮಾನ್ಯ ಶಸ್ತ್ರ ಚಿಕಿತ್ಸೆ 4. ಜೆನಿಟೊ ಮೂತ್ರದ ಶಸ್ತ್ರಚಿಕಿತ್ಸೆಗಳು 5. ಪ್ರಶೂತಿ ಶಸ್ತ್ರ ಮತ್ತು ಸ್ತ್ರೀರೋಗ 6. ನೇತ್ರಶಾಸ್ತ್ರ ಶಸ್ತ್ರ ಚಿಕಿತ್ಸೆ, 7. ಶಸ್ತ್ರ ಚಿಕಿತ್ಸಕ ಗ್ರಂಥಿ ಶಸ್ತ್ರ 8. ಸರ್ಜಿಕಲ್ ಗ್ಯಾಸ್ಟ್ರೊ ಎಂಟ್ರೊಲಾಜಿ 9. ಪೀಡಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳು 10. ನರಶಸ್ತ್ರಚಿಕಿತ್ಸೆ 11. ಇಎನ್ಟಿ ಸರ್ಜರಿ 12. ಮೂಳೆ ಶಸ್ತ್ರಚಿಕಿತ್ಸೆ ಮತ್ತು ವಿಧಾನಗಳು 13. ಆಗ ತಾನೆ ಜನಿಸಿದ ಮಗುವಿನ ಚಿಕಿತ್ಸೆಗಳು 14. ವೈದ್ಯಕೀಯ ತುರ್ತು ಪರಿಸ್ಥಿತಿಗಳು 15. ರೇಡಿಯೇಷನ್ ಅಂಕೊಲಾಜಿ,

ಯೋಜನೆಯ ಅನುಷ್ಠಾನ:

ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳು 2017-18 ಆಯವ್ಯಯ ಭಾಷಣದ ಅನ್ವಯ ಸಹಕಾರಿ ಸಂಘದ ಸದಸ್ಯರಾದ ರೈತರಿಗೆ ಮೀಸಲಾದ ಯಶಸ್ವಿನಿ ಆರೋಗ್ಯ ಯೋಜನೆಯ ರೂಪುರೇಷೆಗಳಂತೆ ಮತ್ತು ಯೋಜನೆಯಲ್ಲಿ ಅಳವಡಿಸಲಾದ ಚಿಕಿತ್ಸಾ ಸೌಲಭ್ಯಗಳಲ್ಲಿ ಯಾವುದೇ ಮಾರ್ಪಾಡುಗಳಿಲ್ಲದೆ ಯೋಜನೆಯನ್ನು ಕರ್ನಾಟಕ ಸರ್ಕಾರವು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ ದಿನಾಂಕ 01/08/2017 ರಂದು ವರ್ಗಯಿಸಲು ಸೂಚಿಸಿರುತ್ತಾರೆ.

You are here: Home ಯೋಜನೆಗಳು ಯಶಸ್ವಿನಿ ಯೋಜನೆ ಯಶಸ್ವಿನಿ ಯೋಜನೆ ಬಗ್ಗೆ