ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆ

ಯೋಜನೆಯ ಉದ್ದೇಶ: ರಾಜ್ಯದ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ಯಾವುದೇ ವ್ಯಕ್ತಿ/ಗಾಯಾಳುಗಳನ್ನು ಆಘಾತದಿಂದ ಹೊರತರಲು ಹಾಗೂ ಇಂತಹ ಸಂಕಷ್ಟದ ಸೂಕ್ಷ್ಮ ಸಮಯದಲ್ಲಿ ತುರ್ತಾಗಿ ಪ್ರಥಮ ಆಧ್ಯತೆಯ ಮೇಲೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು  ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.  ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು/ಉಳಿಸಲು ಮೊದಲ 48 ಗಂಟೆಗಳ ಅವಧಿಗೆ ರೂ.25000/-ಗಳ ವರೆಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರದ ಆದೇಶ ಸಂಖ್ಯೆ: ಅಕುಕ 47 ಎಪ್‍ಪಿರ್ 2014, ದಿನಾಂಕ:13/11/2014 ರ ಪ್ರಕಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗಿರುತ್ತದೆ.

ಅರ್ಹತೆ: ರಾಜ್ಯದ ಭೌಗೋಳಿಕ ಗಡಿಯೊಳಗಿರುವ ರಾಷ್ಟ್ರ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ  ರಸ್ತೆಗಳಲ್ಲಿ ಅಪಘಾತಗಳಿಗೆ ತುತ್ತಾದ ಗಾಯಾಳುಗಳು ಯಾವುದೇ ರಾಜ್ಯದ/ರಾಷ್ಟ್ರದವರಾಗಿದ್ದರೂ ಸಹ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಸಂತ್ರಸ್ಥರಿಗೆ, ಗುರುತಿಸಲ್ಪಟ್ಟ ಹಾಗೂ ಅತಿ ಹತ್ತಿರದ ಆಸ್ಪತ್ರೆಗಳಲ್ಲಿ ತತ್ ಕ್ಷಣದ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ.

Read more...

You are here: Home ಯೋಜನೆಗಳು ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆ ಬಗ್ಗೆ